Thursday, May 8, 2008

ಹಾಗೆ ಸುಮ್ಮನೆ ......

ಈ ವಿಷಯದ ಬಗ್ಗೆ ಮೊದಲೇ ಬರಿಬೇಕು ಅಂಥ ಇದ್ದೆ , ಆದ್ರೆ ಯಾಕೋ ಆಗಿರಲಿಲ್ಲ . ಚೇತನ್ (ಗೆಳೆಯ) ಜೊತೆ discuss ಮಾಡಿಬಿಟ್ಟು ಅಮೇಲೆ ಬರಿಯುವ ಅಂಥ ಇದ್ದೆ . ಅವನಿಗೆ ಬ್ಲಾಗ್ ಓದೋದು ಇಷ್ಟ ಅಂಥ ಗೊತ್ತಾದ ಮೇಲೆ ಇಲ್ಲೇ first ಬರಿಯೋಣ ಅಂಥ ಬರಿತಾ ಇದೀನಿ .

ನಮಗೆ ಬರೋ ಎಲ್ಲ ಯೋಚನೆಗಳು ಒಂದು specific ಭಾಷೆಯಲ್ಲಿ ಬರುತ್ತೆ . ಹೆಂಗೆ ಅಂದ್ರೆ , ನನ್ನ ಬ್ಲಾಗ್ ಅಲ್ಲಿ ಇರೋ one-liners ಎಲ್ಲ ಇಂಗ್ಲಿಷ್ ನಲ್ಲೆ ನನ್ನ ತಲೇಲಿ ಬಂದಿದ್ದು . ಹಾಗಾಗಿ ಯಾವ ಯಾವ ಯೋಚನೆ ಯಾವ ಯಾವ ಭಾಷೆ , ಯಾವ context ಅಲ್ಲಿ ಬರುತ್ತೋ ಅದರಲ್ಲೇ ಇದ್ದರೆ ಚನ್ನ ಅಂಥ ನನ್ನ ಅನಿಸಿಕೆ .
ಒಂದು example ಹೇಳಬೇಕು ಅಂದ್ರೆ ಜಯಂತ್ ಕಾಯ್ಕಿಣಿ ಹೇಳೋ ಹಾಗೆ " ಕಣ್ಣು ತೆರೆದು ಕಾಣುವ ಕನಸೇ ಜೀವನ " .
ಇದನ್ನು ಇಂಗ್ಲಿಷ್ ನಲ್ಲಿ ಹೇಳಿದ್ರೆ " Life is dream with open-eyes". ಅದ್ರೆ ನೋಡಿ ಕನ್ನಡದಲ್ಲಿ ಇರೋ ಎಫೆಕ್ಟ್ ಇಂಗ್ಲಿಷ್ ಲೈನ್ ನಲ್ಲಿ ಇಲ್ಲ ಅಲ್ವ ?

ನಿಮ್ಮ ಯೋಚನೆಗಳು ಹರಿಯಲಿ ಹಾಗೆ ಸುಮ್ಮನೆ .........

1 comment:

Anonymous said...

good pravagilve ahh
Appa